Our BMSSA.. ನಮ್ಮ ಭಾರತೀಯ ಮತಂಗ ಅಕಾಡೆಮಿ . .

 

ಇಸವಿ ೨೦೧೭ರಂದು ಭಾರತೀಯ ಮತಂಗ ಸಾಮಾಜಿಕ ಸಾಂಸ್ಕೃತಿಕ ಅಕಾಡೆಮಿಯು ಕರ್ನಾಟಕದ ಅತ್ಯಂತ ಹಿಂದುಳಿದ ಭಾಗ ಎಂದು ಕರೆಯಲಾಗುವ ಹುಮ್ನಾಬಾದ್‌ದಲ್ಲಿ ಸ್ಥಾಪಿತವಾಯಿತು. ಇದರ ಮೊದಲ ಸ್ಥಾಪನಾ ಟ್ರಸ್ತಿಯಾಗಿ ಶ್ರೀ ಅನಿಲ್ ಕುಮಾರ್ ಕಟ್ಟಿಯವರ ಜೊತೆಗೆ ಇನ್ನೂ ನಾಲ್ಕು ಮಹನೀಯರು ಕೈಗೂಡಿಸಿದರು. ಇದರಿಂದಾಗಿ ಸಮಾಜಕ್ಕೆ ಉಪಯೋಗವಾಗುವಂತಹ ಸಾಂಸ್ಕೃತಿಕ ಹಾಗೂ ಸಾಮಾಜಿಕ, ಧಾರ್ಮಿಕ ಕೆಲಸಗಳನ್ನು ಮಾಡಬೇಕು ಎಂಬುದು ಇದರ ಸಾತ್ವಿಕ ಉದ್ದೇಶ. ಸಂಸ್ಥೆಯು ಇಲ್ಲಿಯವರೆಗೆ ನಡೆಸಿರುವ ಸಾವಿರಾರು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಇದಕ್ಕೆ ಸಾಕ್ಷಿಯಾಗಿವೆ. ವರ್ಷವಿಡೀ ಈ ಸಂಸ್ಥೆಯು ಮುಖ್ಯವಾಗಿ ತನ್ನ ಕ್ಷೇತ್ರವಾದ ಹುಮ್ನಾಬಾದ್ ಜಾಗ ಮತ್ತು ಬೀದರ್‌ವರೆಗಿನ ಹಲವಾರು ಗ್ರಾಮ/ಗ್ರಾಮಾಂತರ ಪ್ರದೇಶಗಳು, ಬೆಂಗಳೂರು, ಮೈಸೂರು ಇತ್ಯಾದಿ ಮಹಾನಗರಗಳು, ಅಂತಾರಾಷ್ಟ್ರೀಯವಾಗಿ ಐರೋಪ್ಯ ಮತ್ತು ಅಮೇರಿಕಾ ಸಂಸ್ಥೆಗಳ ಒಡನಾಟ, ಹೀಗೆ ಅನೇಕ ಸಂಸ್ಥೆಗಳೊಡನೆ ಕೈಗೂಡಿಸಿ, ಹಲವು ಬಾರಿ ಉತ್ಸವ-ಸಂದರ್ಭಗಳನ್ನು ಏರ್ಪಡಿಸದೆ. ಕರ್ನಾಟಕದಲ್ಲಿ ಮತಂಗಮುನಿಯ ಬಗ್ಗೆ ಪ್ರಾಮಾಣಿಕವಾದ ಕಾಳಜಿಯನ್ನು ವಹಿಸಿ ಅದಕ್ಕಾಗಿ ಹಗಲಿರುಳೂ ದುಡಿದ ಸಂಸ್ಥೆ ಇದಾಗಿದೆ. ತನ್ನ ಕ್ಷೇತ್ರದ ಬಹುಸಂಖ್ಯಾತ ಸಮುದಾಯವಾದ ಮಾದಿಗಜನಾಂಗದಲ್ಲಿ ನೆಮ್ಮದಿಯ, ಹೆಮ್ಮೆಯ ಹಾಗೂ ಶಾಂತಿಯುತವಾದ ಭಾವನೆಗಳನ್ನು ಉಂಟುಮಾಡಿ, ಭಾರತೀಯ ಸಂಸ್ಕೃತಿ ಹಾಗೂ ಧರ್ಮದಲ್ಲೇ ಉಳಿಯಲು ಪ್ರೇರೇಪಿಸುತ್ತದೆ. ಬಡಮಕ್ಕಳಿಗೆ ಓದುಬರಹಕ್ಕಾಗಿ ವಿಶೇಷ ಅನುದಾನಗಳನ್ನೂ ಸಹಾಯಗಳನ್ನೂ ನೀಡುತ್ತಿದೆ. ತನ್ನ ಸ್ಥಳದ ಆಸುಪಾಸಿನ ಗ್ರಾಮ-ಗ್ರಾಮಾಂತರದ ಸ್ತಿçÃಯರಿಗೆ ವಿಶೇಷವಾದ ಸವಲತ್ತುಗಳನ್ನು ನೀಡಿ, ಉದ್ಯೋಗಗಳನ್ನು ನೀಡಿ ಅವರಲ್ಲಿ ಹೊಸ ಜೀವನದ ಉತ್ಸಾಹವನ್ನು ನೀಡಲು ಶ್ರಮಿಸುತ್ತಿದೆ. ಇಂದು ಮೈಸೂರು-ಬೆಂಗಳೂರು ಇತ್ಯಾದಿ ನಗರಗಳಲ್ಲಿ ಸ್ಥಳಗಳನ್ನು ಪಡೆದುಕೊಂಡು ಅಲ್ಲಿ ಮತಂಗನ ಬಗ್ಗೆ ಒಂದು ಮ್ಯೂಸಿಯಮ್, ಅಧ್ಯಯನ ಕೇಂದ್ರ, ಸಂಗೀತ-ಸAಸ್ಕೃತಿ ಹಾಗೂ ಇತರ ಸ್ಕಿಲ್ ಉನ್ನತಿಗಾಗಿ ಹಲವಾರು ಆಯೋಜನೆಗಳನ್ನೂ ಧ್ಯೇಯಗಳನ್ನೂ ಆಲೋಚಿಸಿಕೊಂಡು ಅವುಗಳನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ಹಗಲಿರುಳೂ ದುಡಿಯುತ್ತ ಸಾಧ್ಯತೆ ಎಡೆಗೆ ದಾಪುಗಾಲು ಹಾಕುತ್ತಿದೆ. ಪುಸ್ತಕಗಳ ಪ್ರಕಟಣೆ, ಸಂಶೋಧನೆ, ಸಾಮಾಜಿಕ ಸಮಾವೇಶ, ಸಂಗೀತನಾಟ್ಯನಾಟಕಗಳ ಒಕ್ಕೂಟ-ಉತ್ಸವಗಳು ಇತ್ಯಾದಿ ಅನೇಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕರ್ನಾಟಕದ ಪ್ರಮುಖ ಸಂಸ್ಥೆಯಾಗಿ ಮೂಡುತ್ತಿದೆ.

Bharatiya Matanga
Samskrtika Samajika
Academy

Karnataka Sangita

Recognized by Kannada University, Hampi, Karnataka, we offer MMus and BMus to aspiring students in Karnataka and abroad.  We have an outstanding faculty to impart authentic and valued knowledge in Karnataka music, both for its performance and academic.  We have an erudite group of scholars who will impart in-depth and research-based knowledge.  Our Research methodologies are based on Indian research methodologies. 

DSC07272

Bharatanatyam

 Recognized by Kannada University, Hampi, Karnataka, we offer MDance and BDance to Bharatanatyam aspiring students in Karnataka and abroad.  We have an outstanding faculty to impart authentic and valued knowledge in Bharatanatyam, both for its performance and academic.  We have an erudite group of scholars who will impart in-depth and research-based knowledge.  Our Research methodologies are based on Indian research methodologies. 

Ranj2

Any Questions ?

Instituion is recognized by Prestigious Kannada University, Hampi, Karnataka, to get admissions from qualified students to appear for MPA (Karnataka Music and Bharatanatyam) and BPA (Karnataka Music and Bharatanatyam), 

Any one who wish to get admission to MPA should have adequate knowledge in Karnataka Music of MPA in Music and in Bharatanatyam for MPA in Natya Plus any completed UG degree in any recognized University of State or in Country

They can as long as they are citizens of India but living outside India for job or anything else.  However, all non- citizens of India should obtain special permission from university and our instituion will help in this matter 

University fixes semester fees (paid annually for two semesters in an academic year) and students, after getting registrations should also pay a service fee to our Instituon. 

Please contact our Admin Sri Santosh Prasad.  you can get that information in our contact us section of this website. 

© 2022 All Rights Reserved.